ಗಣಪತಿ ಹಬ್ಬಕ್ಕೆ ಶಿವಮೊಗ್ಗ ಪೊಲೀಸರಿಂದ ಮಹಾರಾಷ್ಟ್ರ ಮಾದರಿ ‘ಮೊಹಲ್ಲ ಕಮಿಟಿ’

ಶಿವಮೊಗ್ಗದಲ್ಲಿ ಗೌರಿ, ಗಣೇಶ ಚತುರ್ಥಿ ಕಳೆಗಟ್ಟಿದೆ. ಎಲ್ಲೆಲ್ಲೂ ಸಡಗರ. ಎಲ್ಲೆಡೆಯೂ ಸಂಭ್ರಮ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ. ಮನೆಗಳಲ್ಲಿ ಸಿಹಿ ಅಡುಗೆ. ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಹಬ್ಬ ಆಚರಿಸಲಾಗುತ್ತಿದೆ. ಇದಕ್ಕಾಗಿಯೇ ಪೊಲೀಸ್ ಇಲಾಖೆ ನಾಲ್ಕು ತಿಂಗಳು ಶ್ರಮ ವಹಿಸಿದೆ.

ಗಣೇಶ ಚತುರ್ಥಿ ಸಂದರ್ಭ, ಅಹಿತಕರ ಘಟನೆ ಜರುಗದಂತೆ ತಡೆಯಲು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿದೆ. ವಿಶೇಷ ಅಂದರೆ, ಈ ಬಾರಿ ಪೊಲೀಸರ ಜೊತೆಗೆ ಸಾರ್ವಜನಿಕರೂ ಕೈ ಜೋಡಿಸಿದ್ದಾರೆ. ಸಣ್ಣಪುಟ್ಟ ಗಲಾಟೆ, ಗೊಂದಲಗಳನ್ನು ಸ್ಥಳೀಯವಾಗಿಯೇ ನಿಯಂತ್ರಿಸಲು ಯೋಜನೆ ಸಿದ್ಧವಾಗಿದೆ. ಹಾಗಾದರೆ ಗಣೇಶ ಚತುರ್ಥಿಗೆ ಪೊಲೀಸ್ ಇಲಾಖೆ ಕೈಗೊಂಡಿರುವ ಪ್ಲಾನ್​ಗಳೇನು.. ಪೊಲೀಸ್ ಇಲಾಖೆ ಜೊತೆಗೆ ಸಾರ್ವಜನಿಕರು ಕೈಜೋಡಿಸುವುದು ಹೇಗೆ.. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಪ್ಲಾನ್ 1

ಜಿಲ್ಲೆಯಾದ್ಯಂತ ರೌಡಿಗಳು, ಕ್ರಮಿನಲ್​ಗಳನ್ನು ಪತ್ತೆ ಹಚ್ಚಿ ವಾರ್ನಿಂಗ್ ನೀಡಲಾಗಿದೆ. 2800 ರೌಡಿಗಳು, 600 ಕ್ರಿಮಿನಲ್​ಗಳಿಗೆ ಖಾಕಿಗಳು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಕೆಲವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸಿ, 50 ಸಾವಿರದಿಂದ 5 ಲಕ್ಷದವರೆಗೂ ಬಾಂಡ್ ಕೊಡುವಂತೆ ಮಾಡಲಾಗಿದೆ.

ಪ್ಲಾನ್ 2

ಮಹಾರಾಷ್ಟ್ರ ಮಾದರಿಯಲ್ಲಿ ಮೊಹಲ್ಲ ಕಮಿಟಗಳನ್ನು ರಚಿಸಲಾಗಿದೆ. 30ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶಗಳಲ್ಲಿ ಈ ಕಮಿಟಿಗಳು ರಚನೆಯಾಗಿವೆ. ಆಯಾ ಏರಿಯಾಗಳ ಹಿರಿಯ ನಾಗರೀಕರು, ಧರ್ಮ, ಜಾತಿ ಮುಖಂಡರು ಕಮಿಟಿಯಲ್ಲಿದ್ದಾರೆ. ಸಣ್ಣಪುಟ್ಟ ಜಗಳಗಳನ್ನು ಇವರೇ ಬಗೆಹರಿಸುತ್ತಾರೆ. ಕೈ ಮೀರಿದರೆ ಖಾಕಿ ಪಡೆ ಎಂಟ್ರಿಯಾಗುತ್ತೆ. ಗಲಭೆಕೋರರ ಸದ್ದಡಗಿಸಲಿದೆ.

ಪ್ಲಾನ್ 3

ಜಿಲ್ಲೆಯ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಈ ಮೊದಲೇ 90 ಕ್ಯಾಮೆರಾಗಳಿದ್ದವು. ಹೆಚ್ಚುವರಿಯಾಗಿ 100 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು, ಜಿಲ್ಲೆಯಾದ್ಯಂತ 245 ಸಿಸಿಟಿವಿ ಕ್ಯಾಮೆರಗಳು ಕೆಲಸ ಮಾಡುತ್ತಿವೆ. 24 ಗಂಟೆಯೂ ಪ್ರತೀ ಸೆಕೆಂಡ್​​​ನ ದೃಶ್ಯಗಳನ್ನು, ಪ್ರತಿಯೊಬ್ಬರ ಚಹರೆಯನ್ನೂ ಇವು ರೆಕಾರ್ಡ್ ಮಾಡಿಕೊಳ್ಳುತ್ತವೆ. ವಿಶೇಷ ಅಂದರೆ, ಜಿಲ್ಲಾ ರಕ್ಷಣಾಧಿಕಾರಿ ಅಭಿವನ್ ಖರೆ, ತಮ್ಮ ಕಚೇರಿಯಲ್ಲೇ ಕುಳಿತು ಸಿಸಿಟಿವಿ ದೃಶ್ಯಗಳನ್ನು ಮಾನಿಟರ್​ ಮಾಡಬಹುದು. ಇವುಗಳ ಜೊತೆಗೆ ದಿವ್ಯ ದೃಷ್ಟಿ ವಾಹನ, ಪೊಲೀಸರ ಡ್ರೋಣ್ ಕ್ಯಾಮೆರಾಗಳು ರೌಂಡ್ಸ್​ ಮಾಡಲಿವೆ.

ಪ್ಲಾನ್ 4

ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರ ಬಿಗಿ ಬಂದೋಬಸ್ತ್​ ಇದೆ. ಸ್ಥಳೀಯ ಪೊಲೀಸರ ಜೊತೆಗೆ, 21 ಡಿಎಆರ್​​ ತುಕಡಿಯೂ ರಕ್ಷಣೆ ಜವಾಬ್ದಾರಿ ಹೊತ್ತಿದೆ. ಈವರೆಗೂ 10 – 12 ಡಿಎಆರ್​​ ತುಕಡಿಗಳಷ್ಟೇ ಲಭ್ಯವಿತ್ತು. ಈ ಬಾರಿ ಅದು ಎರಡು ಪಟ್ಟಾಗಿದೆ. ಎಲ್ಲರಿಗೂ ವಿಶೇಷ ಯುನಿಫಾರಂ.. ಎಲ್ಲರೂ ಶಸ್ತ್ರಾಸ್ತ್ರ ಹೊಂದಿದ್ದಾರೆ.. ಎಂತಹ ಪರಿಸ್ಥಿಯನ್ನೂ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ ಪಟ್ಟಣಗಳಲ್ಲಿ ಪ್ರತೀ ಗಣಪತಿಗೊಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಓಂ ಗಣಪತಿ, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ ಪೊಲೀಸರ ಸಂಖ್ಯೆ ಹೆಚ್ಚಲಿದೆ. ಆರು ಸಾವಿರ ಪೊಲೀಸರು ಭದ್ರತೆ ಇರಲಿದೆ.

ಪ್ಲಾನ್ 5

ಗಣಪತಿ ವಿಸರ್ಜನೆ ಬಗ್ಗೆಯೂ ಪೊಲೀಸರು ಮುತುವರ್ಜಿ ವಹಿಸಿದ್ದಾರೆ. ಕಳೆದ ಬಾರಿ ಹಾಡೋನಹಳ್ಳಿಯಲ್ಲಿ ತೆಪ್ಪ ಮುಳುಗಿ, ದುರಂತ ಸಂಭವಿಸಿತ್ತು. ಆ ಕಾರಣದಿಂದ, ಈ ಬಾರಿ ತೆಪ್ಪದಲ್ಲಿ ಗಣಪತಿ ವಿಸರ್ಜನೆ ನಿಷೇಧಿಸಲಾಗಿದೆ. ಬೋಟ್​ ಬಳಸುವಂತೆ ಆದೇಶಿಸಲಾಗಿದೆ. ಇನ್ನು, ಬೋಟ್​ನಲ್ಲಿ ತೆರಳುವವರು ಲೈಫ್​ ಜಾಕೆಟ್ ಬಳಸುವುದೂ ಕಡ್ಡಾಯ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s