ಬಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್ ಅವರ ಕಡು ಕಷ್ಟ ಕಂಡಿತ್ತು ಶಿವಮೊಗ್ಗ ಬಸ್ ನಿಲ್ದಾಣ

ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರೊಬ್ಬ ನಿಪುಣ. ಇಡೀ ವಿಶ್ವವೇ ಅವರಿಗೆ ತಲೆಬಾಗುತ್ತದೆ. ಅಮೆರಿಕಾದ ಬಾಹ್ಯಾಕಾಶ ವಿಜ್ಞಾನಿಗಳೇ ಅವರಿಂದ ಮಾರ್ಗದರ್ಶನ ಪಡೆದಿದ್ದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇಟ್ಟ ಹೆಜ್ಜೆ ಹೆಜ್ಜೆಯ ಹಿಂದೆಯೂ ಅವರಿದ್ದರು. ಆದರೆ ಅಂತಹ ಧೀಮಂತ ಬಾಹ್ಯಾಕಾಶ ವಿಜ್ಞಾನಿಯನ್ನು ಜಗತ್ತು ಕಳೆದುಕೊಂಡಿದೆ.

ಪದ್ಮವಿಭೂಷಣ ಉಡುಪಿ ರಾಮಚಂದ್ರ ರಾವ್​ ಅರ್ಥಾತ್​​ ಯು.ಆರ್​.ರಾವ್ (85) ಇಂದು ಬೆಳಗ್ಗೆ ಬೆಂಗಳೂರಿನ ಇಂದಿರಾನಗರದಲ್ಲಿರುವ ತಮ್ಮ ಮನೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತೇವೆ. ಅದರ ಕಾರ್ಯಗಳನ್ನು ಕೊಂಡಾಡುತ್ತೇವೆ. ಇಸ್ರೋ ಹಾರಿ ಬಿಡುವ ರಾಕೆಟ್​ಗಳನ್ನು ಟಿವಿ ಪರದೆ ಮೇಲೆ ಕಂಡು ಪುಳಕಗೊಳ್ಳುತ್ತೇವೆ. ಮಂಗಳಯಾನ ಕೈಗೊಂಡಾಗ ನಾವು ಯಾರಿಗೇನು ಕಮ್ಮಿಯಿಲ್ಲ ಅಂತಾ ಗರ್ವ ಪಟ್ಟಿದ್ದೇವೆ. ಇಷ್ಟೆಲ್ಲ ಹೆಮ್ಮೆಯ ಭಾವ ಮೂಡಿಸಿದವರಲ್ಲಿ ಒಬ್ಬರು ಬಾಹ್ಯಾಕಾಶ ವಿಜ್ಞಾನಿ ಯು.ಆರ್​.ರಾವ್​. ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸಿದವರಲ್ಲಿ ಇವರೂ ಒಬ್ಬರು.

ಮಂಗಳಾಯನದಂತಹ ಅತೀ ಸೂಕ್ಷ್ಮ, ಅತೀ ದುಬಾರಿ, ಅತೀ ಗಂಭೀರ ಪ್ರಾಜೆಕ್ಟ್​​ನ ಸಾರಥ್ಯ ವಹಿಸಿದ್ದರು ಯು.ಆರ್​.ರಾವ್​. ಹತ್ತು ವರ್ಷ ಅಧ್ಯಕ್ಷರಾಗಿ ಇಸ್ರೋ ಸಂಸ್ಥೆಯನ್ನು ಮುನ್ನಡೆಸಿದ್ದರು. ನಿವೃತ್ತಿಯ ಬಳಿಕವೂ ಅವರ ಉತ್ಸಾಹ ಕುಗ್ಗಲಿಲ್ಲ. ಇಸ್ರೋ ಜೊತೆಗೆ ಗುರುತಿಸಿಕೊಂಡರು, ಮೊನ್ನೆ ಮೊನ್ನೆವರೆಗೂ ಇಸ್ರೋ ಹಾರಿಬಿಟ್ಟ ರಾಕೆಟ್​​ನ ಟೆಕ್ನಾಲಜಿಯನ್ನು ಪರಿಶೀಲಿಸಿದ್ದರು ವಿಜ್ಞಾನಿ ಯು.ಆರ್​.ರಾವ್.

ಶಿವಮೊಗ್ಗ ಬಸ್ ನಿಲ್ದಾಣ ಬದುಕಿನ ಪಾಠ ಕಲಿಸಿತು

ಯು.ಆರ್​.ರಾವ್ ಅವರು ಮೂಲತಃ ಉಡುಪಿಯವರು. ಕಡು ಬಡ ಕುಟುಂಬ. ಆರಂಭಿಕ ಹಂತದಲ್ಲಿ ಓದಿನತ್ತ ಅಷ್ಟು ಆಸಕ್ತಿಯಿರಲಿಲ್ಲ. ಕ್ರಮೇಣ ವಿಜ್ಞಾನದೆಡೆಗೆ ಆಸಕ್ತಿ ಬೆಳೆಯಿತು (ಸಂದರ್ಶನವೊಂದರಲ್ಲಿ ಯು.ಆರ್​.ರಾವ್​ ಅವರೇ ಹೇಳಿಕೊಂಡಿದ್ದಾರೆ). ಸ್ಕಾಲರ್​​ಶಿಪ್​​ನ ನೆರವಿನಿಂದಲೇ ಓದು ಮುಗಿಯಿತು. ಪದವಿಯನ್ನೂ ಪಡೆದರು ಯು.ಆರ್​.ರಾವ್​. ಈ ಮಧ್ಯೆ ಅಹಮದಾಬಾದ್​​ನ ಫಿಸಿಕಲ್ ರಿಸರ್ಚ್​ ಲ್ಯಾಬ್​ಗೆ ಆಗಾಗ ಭೇಟಿ ಕೊಡುತ್ತಿದ್ದರು.

ಬಾಹ್ಯಾಕಾಶ ವಿಜ್ಞಾನಿಗಳ ಪಾಲಿಗೆ ಫಿಸಿಕಲ್ ರಿಸರ್ಚ್​ ಲ್ಯಾಬ್ ಶಾಲೆ ಇದ್ದಂತೆ. ಆ ಕಾಲದಲ್ಲಿ ಉಡುಪಿಯಿಂದ ಅಹಮದಾಬಾದ್​​ಗೆ ನೇರ ಬಸ್ ಸಂಪರ್ಕವಿರಲಿಲ್ಲ. ಆದ್ದರಿಂದ ಶಿವಮೊಗ್ಗಕ್ಕೆ ಬರುವುದು ಅನಿವಾರ್ಯವಿತ್ತು. ಯು.ಆರ್​.ರಾವ್ ಅವರೂ ಶಿವಮೊಗ್ಗಕ್ಕೆ ಬರುತ್ತಿದ್ದರು. ರಾತ್ರಿ ಹೊತ್ತು ಬಸ್ ನಿಲ್ದಾಣದಲ್ಲಿಯೇ ಉಳಿಯುತ್ತಿದ್ದರು. ಯಾಕೆಂದರೆ ಹೊಟೇಲ್​ನಲ್ಲಿ ಉಳಿಯುವುದಕ್ಕೆ ಅವರ ಬಳಿ ಹಣವಿರಲಿಲ್ಲ. ಅಹಮದಾಬಾದ್​​ಗೆ ತೆರಳುವಾಗ ಮತ್ತು ಅಹಮದಾಬಾದ್​ನಿಂದ ಮರಳಿದಾಗ ಶಿವಮೊಗ್ಗ ಬಸ್ ನಿಲ್ದಾಣದ ಬೆಂಚುಗಳೇ ಅವರಿಗೆ ಹೊಟೇಲ್​ ಲಾಡ್ಜ್​ ಆಗುತ್ತಿತ್ತು. ಅಲ್ಲೇ ರಾತ್ರಿ ಕಳೆಯುತ್ತಿದ್ದರು. ಶಿವಮೊಗ್ಗ ಬಸ್ ನಿಲ್ದಾಣ ವಿಜ್ಞಾನಿ ಯು.ಆರ್​.ರಾವ್​ ಅವರಿಗೆ ಬದುಕಿನ ಪಾಠ ಕಲಿಸಿದ ಸ್ಥಳ. (ಸಂದರ್ಶನವೊಂದರಲ್ಲಿ ಯು.ಆರ್​.ರಾವ್ ಅವರು ಹೇಳಿಕೊಂಡಿದ್ದಾರೆ).

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s