EXCLUSIVE | ಶಿವಮೊಗ್ಗದ ಯುವಕ ಭಯೋತ್ಪಾದಕರ ಲ್ಯಾಬೋರೇಟರಿಯಲ್ಲಿ ಆರು ವರ್ಷ ಕಳೆದದ್ದೇಕೆ? 

ಅದು ಅತ್ಯಂತ ಘೋರ ಉಗ್ರರ ನಾಡು. ಹಲವು ಭಯೋತ್ಪಾದನ ಸಂಘಟನೆಗಳಿಗೆ ಆ ನೆಲವೇ ತವರೂರು. ತಾಲಿಬಾನ್ ಎಂಬ ಉಗ್ರ ಸಂಘಟನೆ ಹುಟ್ಟಿದ್ದೇ ಅಲ್ಲಿ. ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ ಒಸಾಮಾ ಬಿನ್ ಲಾಡನ್ ಬಹು ವರ್ಷ ಅಡಗಿ ಕುಳಿತಿದ್ದಿದ್ದೇ ಇಲ್ಲಿ. ನಿಮಗೆ ಗೊತ್ತಿದೆಯೋ ಇಲ್ಲವೋ, ಆ ದೇಶಕ್ಕೆ ತೆರಳುವುದಕ್ಕೆ ಯಾವ ದೇಶದ ಜನರಿಗೂ ವೀಸಾ ಸಿಗುವುದಿಲ್ಲ. ಇನ್ನು, ಆ ದೇಶದ ನೆಲದ ಮೇಲೆ ಮಳೆ ಹನಿಗಿಂತಲೂ ಹೆಚ್ಚು ರಕ್ತದ ಕೋಡಿ ಹರಿದಿದೆ. ಅಂತಹ ನಾಡಿಗೆ ಶಿವಮೊಗ್ಗದ ಒಬ್ಬ ಹುಡುಗ ಹೋಗಿ ಬಂದಿದ್ದಾನೆ. ಆರು ವರ್ಷ ಆ ದೇಶದಲ್ಲಿ ಉಳಿದಿದ್ದ. ಶಿವಮೊಗ್ಗದ ಹುಡುಗ ಉಳಿದುಕೊಂಡಿದ್ದ ಜಾಗದ ಮೇಲೆ ಭಯೋತ್ಪಾದನಾ ದಾಳಿಯಾಗಿದೆ. ಹತ್ತಕ್ಕೂ ಹೆಚ್ಚು ಸೈನಿಕರು ಸಾವಿಗೀಡಾಗಿದ್ದಾರೆ. ಅಂದಹಾಗೆ, ಆ ಜಾಗ ಯಾವುದು ಅಂತೀರಾ… ಅಫ್ಘಾನಿಸ್ತಾನ.

ಶಿವಮೊಗ್ಗದ ಯುವಕ ಅಫ್ಘಾನಿಸ್ತಾನಕ್ಕೆ ಹೋಗಿದ್ದೇಕೆ?

ಆ ಹುಡುಗ ಅಫ್ಘಾನಿಸ್ತಾನದಲ್ಲಿ ಆರು ವರ್ಷ ಏನೇನೆಲ್ಲ ಮಾಡಿದ..?

ಅಫ್ಘಾನಿಸ್ತಾನ ಅಂತಿಂಥಾ ದೇಶ ಅಲ್ಲ. ಅಲ್ಲಿ ಬೀದಿ ಬೀದಿಗೊಂದು ಉಗ್ರ ಸಂಘಟನೆಯಿದೆ. ಮಕ್ಕಳ ಕೈಗೂ ಬಂದೂಕು, ಬುಲೆಟ್ಟು, ಗ್ರನೇಡ್ ಸಿಗುತ್ತದೆ. ವಿಶೇಷ ಅಂದರೆ, ಅಫ್ಘಾನಿಸ್ತಾನದ ಉಗ್ರರನ್ನು ಬಗ್ಗು ಬಡಿಯುವುದಕ್ಕೆ ರಷ್ಯಾ ದೇಶಕ್ಕೂ ಸಾಧ್ಯವಾಗಿಲ್ಲ, ಅಮೆರಿಕಾಗೂ ಸಾಧ್ಯವಾಗಿಲ್ಲ.. ಅಂತಹ ದೇಶದಲ್ಲಿ ಶಿವಮೊಗ್ಗದ ಯುವಕ ಆರು ವರ್ಷ ಕಳೆದಿದ್ದ. ಆ ಯುವಕ ಉಳಿದ್ದಿದ ಪ್ರದೇಶ ಸಮಾನ್ಯದ್ದಲ್ಲ. ಭಯೋತ್ಪಾದಕರ ಪಾಲಿಗೆ ಹಾಟ್ ಫೇವರೆಟ್ ಟಾರ್ಗೆಟ್ ಜಾಗ ಅದು. ಯಾಕಂದರೆ ಆ ಜಾಗದಲ್ಲಿ ಅಮೆರಿಕಾ ಸೇನೆಯ ಡೇರೆ ಇತ್ತು. ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಿದ್ಧವಾಗುತ್ತಿತ್ತು. ಈಗ ಅದೇ ಜಾಗದ ಮೇಲೆ ಉಗ್ರರು ಅಟ್ಯಾಕ್ ಮಾಡಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ ಹತ್ತಕ್ಕೂ ಹೆಚ್ಚು ಜನರು ದಾಳಿಯಲ್ಲಿ ಹತರಾಗಿದ್ದಾರೆ.

ಅಫ್ಘಾನಿಸ್ತಾನಕ್ಕೆ ತೆರಳಿದ್ದ ಶಿವಮೊಗ್ಗದ ಯುವಕ ಬೆಳೆದಿದ್ದು, ಓದಿದ್ದು ಎಲ್ಲವೂ ಶಿವಮೊಗ್ಗದಲ್ಲೇ. ನ್ಯಾಷನಲ್ ಪಿಯುಸಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಅಧ್ಯಯನ. ATNCC ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದ. ಆ ನಂತರ ಆ ಯುವಕನನ್ನು ಕೈ ಬೀಸಿ ಕರೆದಿದ್ದೇ ಅಫ್ಘಾನಿಸ್ತಾನ. ಯಾವ ದೇಶಕ್ಕೆ ತೆರಳುವುದಕ್ಕೆ ವಿದೇಶಿಯರಿಗೆ ಅವಕಾಶವೇ ಇಲ್ಲವೋ ಅಂತಹ ದೇಶಕ್ಕೆ ಶಿವಮೊಗ್ಗದ ಯುವಕ ಹೋದ. ಒಂದಲ್ಲ ಎರಡಲ್ಲ ಆರು ವರ್ಷ ಅಲ್ಲೇ ಉಳಿದಿದ್ದ. ಅವನು ಉಳಿದಿದ್ದ ಜಾಗದ ಸನಿಹದಲ್ಲೇ ನೆತ್ತರದಾಹಿ ಉಗ್ರರು ದಾಳಿ ಮಾಡಿರುವುದು. ಬಾಂಬ್ಗಳ ಸುರಿಮಳೆಗೈದಿರುವುದು. ಅಂದಹಾಗೆ, ಆ ಯುವಕ ಯಾರು ಅಂತೀರಾ.. ಆತನೆ ಮಹೇಶ್ ಶೆಟ್ಟಿ. ವಿನೋಬನಗರದ ನಿವಾಸಿ ಮಹೇಶ್ ಶೆಟ್ಟಿ ಅಫ್ಘಾನಿಸ್ತಾನಕ್ಕೆ ಹೋಗಿದ್ದೇ ಒಂದು ರೋಚಕ ಅಧ್ಯಾಯ. ಆತ ಅಲ್ಲಿ ಕಳೆದ ಒಂದೊಂದು ಕ್ಷಣವೂ ಮೈ ಜುಮ್ ಅನಿಸುತ್ತೆ. ಅದರ ಕಂಪ್ಲೀಟ್ ಮಾಹಿತಿ ನಾಳೆ ಸಂಜೆ ಪ್ರಕಟಿಸುತ್ತೇವೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s