ವರುಣನಿಗೆ ಸಿಟ್ಟು, ಸೂರ್ಯನಿಗೆ ಪ್ರೀತಿ, ಸುಡುತ್ತಿದೆ ಶಿವಮೊಗ್ಗ ಜಿಲ್ಲೆ

ಲೈವ್ ಕನ್ನಡ ಶಿವಮೊಗ್ಗ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಕಾದ ಬಾಣಲೆಯಾಗಿಬಿಟ್ಟಿದೆ. ಕಳೆದ ವರ್ಷಕ್ಕಿಂತಲೂ ಕಡಿಮೆ ಉಷ್ಣಾಂಶ ದಾಖಲಾಗಿದ್ದರೂ, ಬಿಸಿಲ ಬೇಗೆಯಿಂದ ಜನ ಹೈರಾಣಾಗಿದ್ದಾರೆ. ಮನೆ ಬಿಟ್ಟು ಹೊರಗೆ ಬರಲು ಅಂಜುತ್ತಿದ್ದಾರೆ. ಪ್ರಾಣಿಗಳ ಪಾಡಂತೂ ಹೇಳತೀರದಾಗಿದೆ. (READ ALSO :ಕಾದ ಬಾಣಲೆಯಂತಾಗಿದೆ ಶಿವಮೊಗ್ಗ, ತಣ್ಣಗಿದ್ದ ಆಗುಂಬೆಯೂ ಮೈಸುಡುತ್ತಿದೆ )

ಏರುತ್ತಲೇ ಇದೆ ಉಷ್ಣಾಂಶ

ಶಿವಮೊಗ್ಗ ನಗರದಲ್ಲಿ ಬಿಸಿಲ ತಾಪ

ಕಳೆದ ವರ್ಷದ ಮೇ ತಿಂಗಳಲ್ಲಿ, ಉಷ್ಣಾಂಶ, 42.5 ಡಿಗ್ರಿ ತಲುಪಿತ್ತು. ಜಿಲ್ಲೆಯ ಮಟ್ಟಿಗೆ ಇದು ದಾಖಲೆ ಉಷ್ಣಾಂಶವಾಗಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ 41 ಡಿಗ್ರಿ ದಾಖಲಾಗಿತ್ತು. ಈ ಬಾರಿ, ಜಿಲ್ಲೆಯ ಉಷ್ಣಾಂಶ 40 ಡಿಗ್ರಿಗೆ ಸೆಲ್ಷಿಯನ್ಸ್ ದಾಖಲಾಗಿದೆ.

ಮಳೆಯಿಂದ ತಂಪಾಗಿದ್ದು ಮತ್ತೆ ಏರಿತ್ತಿದೆ

ಶಿವಮೊಗ್ಗದಲ್ಲಿ ಸುರಿದಿದ್ದ ಮಳೆ

ಎರಡು ವಾರದ ಹಿಂದೆ ಜಿಲ್ಲೆಯ ವಿವಿಧಡೆ ಮಳೆಯಾಗಿತ್ತು. ಇದರಿಂದ ಉಷ್ಣಾಂಶ ಕೊಂಚ ತಗ್ಗಿತ್ತು. ಆದರೆ ದಿನ ಕಳೆದಂತೆ ವರುಣನಿಗೆ ಮುನಿಸು ಹೆಚ್ಚಾಗಿದೆ. ಜಿಲ್ಲೆಯಾದ್ಯಂತ ಬಿಸಿಲ ಝಳವೂ ಹೆಚ್ಚುತ್ತಿದೆ.

ತಂಪು ತಂಪು, ಕೂಲ್ ಕೂಲ್ಗೆ ಜನರ ಮೊರೆ

ಛತ್ರಿ ಹಿಡಿದು ಓಡಾಡುತ್ತಿರುವ ನಾಗರೀಕರು

ಮಳೆಗಾಲದಲ್ಲಿ ಮನೆಯಿಂದ ಹೊರಬರುತ್ತಿದ್ದ ಛತ್ರಿಗಳು, ಈಗ ಬೇಸಿಗೆಯಲ್ಲೂ ಕೆಲಸ ಮಾಡುತ್ತಿವೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹೆಚ್ಚಾಗಿ ಛತ್ರಿಗಳನ್ನು ಬಳಸುತ್ತಿದ್ದಾರೆ. ಕಲ್ಲಂಗಡಿ ಸೇರಿದಂತೆ ತಂಪೆನಿಸುವ ಹಣ್ಣುಗಳು ಮತ್ತು ಎಳನೀರಿಗೆ ಡಿಮಾಂಡ್ ಹೆಚ್ಚಿದೆ. ಜ್ಯೂಸ್ ಸೆಂಟರ್ಗಳೂ ಬ್ಯುಸಿಯಾಗಿವೆ. ಕಚೇರಿ ಹಾಗೂ ಮನೆಗಳಲ್ಲಿ ಎಸಿ ಮತ್ತು ಫ್ಯಾನ್ ನಿರಂತರ ಕೆಲಸ ಮಾಡುತ್ತಿವೆ. ಆಗಾಗ ವಿದ್ಯುತ್ ಕೈ ಕೊಟ್ಟರೆ, ಜನ ಬೆವರಲ್ಲಿ ಬೆಂದು ಹೋಗುತ್ತಿದ್ದಾರೆ.

ಮರಗಳಿಲ್ಲ, ನೆರಳಿಲ್ಲ, ತಂಗಾಳಿಯೂ ಇಲ್ಲ

ತೀರ್ಥಹಳ್ಳಿ ಮತ್ತು ಭದ್ರಾವತಿಯಲ್ಲಿ ಬಿಸಿಲ ಬೇಗೆ

ಜಿಲ್ಲೆಯ ವಿವಿಧೆಡೆ ಅಭಿವೃದ್ಧಿ, ರಸ್ತೆ ಅಗಲೀಕರಣದ ನೆಪದಲ್ಲಿ ಮರಗಳನ್ನು ಕಡಿಯಲಾಗಿದೆ. ಪರಿಣಾಮ, ನೆರಳು ಸಿಗುತ್ತಿಲ್ಲ. ತಂಗಾಳಿಯ ಸುಳಿವೂ ಇಲ್ಲ. ಈ ಮಧ್ಯೆ, ಮತ್ತಷ್ಟು ಮರಗಳಿಗೆ ಕೊಡಲಿ ಹಾಕಲು, ನೀಲನಕ್ಷೆ ಸಿದ್ಧಪಡಿಸಲಾಗಿದೆ.

ಈ ವಾರದ ತಾಪಮಾನ. ಕೃಪೆ: accuweather ವೆಬ್ಸೈಟ್

 

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s