ಶಿವಮೊಗ್ಗದ ‘ಓಬವ್ವ ಪಡೆ’ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ‘ಆ್ಯಂಟಿ ರೋಮಿಯೋ ಪಡೆ’

ಲೈವ್ ಕನ್ನಡ ಶಿವಮೊಗ್ಗ

ಯುವತಿಯರು, ಮಹಿಳೆಯರ ಹಿಂದೆ ಬೀಳುತ್ತಿದ್ದ ಬೀದಿ ಕಾಮಣ್ಣರಿಗೆ ಉತ್ತರ ಪ್ರದೇಶದ ಆ್ಯಂಟಿ ರೋಮಿಯೋ ಪಡೆ, ದುಸ್ವಪ್ನವಾಗಿ ಕಾಡುತ್ತಿದೆ. ಸಿಎಂ ಆಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಈ ಪಡೆ ಅಸ್ತಿತ್ವಕ್ಕೆ ಬಂದಿದೆ. ವರ್ಷದ ಹಿಂದೆ, ಶಿವಮೊಗ್ಗದಲ್ಲೂ ಇಂಥದ್ದೇ ಪ್ರಯೋಗ ನಡೆದಿತ್ತು. ನಗರದಲ್ಲಿ ಪುಂಡರ ಹಾವಳಿಯೂ ತಗ್ಗಿತ್ತು. ಆನಂತರ ಪಡೆಗೆ ಏನಾಯಿತು? ಅದರ ಸ್ಥಿತಿ ಹೇಗಿದೆ? ಇಲ್ಲಿದೆ ಪೂರ್ಣ ಮಾಹಿತಿ.

ಬೀದಿ ಕಾಮಣ್ಣರನ್ನು ಪಾಠ ಕಲಿಸಿದ್ದಳು ‘ಓವವ್ವ’

ರವಿ ಡಿ.ಚನ್ನಣ್ಣನವರ್ ಅವರು ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿ ಆಗಿದ್ದ ಸಂದರ್ಭ, ಓಬವ್ವ ಪಡೆ ಎಂಬ ವಿಶೇಷ ಟೀಮ್ ರಚಿಸಿದರು. 2016ರ ಜುಲೈ 15ರಂದು ಈ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ಮಹಿಳಾ ಸಬ್ ಇನ್ಸ್ಪೆಕ್ಟರ್ ಮತ್ತು ನಾಲ್ವರು ಸಿಬ್ಬಂದಿ ಪಡೆಯಲ್ಲಿದ್ದರು. ಇವರಿಗೆ ಪ್ರತ್ಯೇಕ ಜೀಪು ಒದಗಿಸಲಾಗಿತ್ತು. (Live Kannad Youtube Channel Click Here)

ಓಬವ್ವ ಪಡೆ ಕಾರ್ಯಾಚರಣೆ ಹೇಗಿತ್ತು?

ಬೀದಿ ಕಾಮಣ್ಣರ ಬೆನ್ನು ಹತ್ತುವುದೇ ಓಬವ್ವ ಪಡೆಯ ಗುರಿಯಾಗಿತ್ತು. ಶಾಲಾ, ಕಾಲೇಜು, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಪಾರ್ಕು, ಸಿನಿಮಾ ಥಿಯೇಟರ್ ಎಲ್ಲಾ ಕಡೆಯೂ ಓಬವ್ವ ಪಡೆ ಕಾರ್ಯಾಚರಿಸುತ್ತಿತ್ತು. ಮಹಿಳಾ ಪೊಲೀಸರು ಮಫ್ತಿಯಲ್ಲಿ ನಿಂತು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಪುಂಡರು ಬಾಲ ಬಿಚ್ಚಿದ ತಕ್ಷಣ, ಒದ್ದು ಜೀಪಿಗೆ ತುಂಬುತ್ತಿದ್ದರು. ಈವ್ ಟೀಸಿಂಗ್ ಕೇಸು ಜಡಿದು, ಶಾಸ್ತಿ ಮಾಡುತ್ತಿದ್ದರು. ಸಿಟಿ ಬಸ್ಗಳಲ್ಲೂ ಸಂಚರಿಸಿ, ಬಿಸಿ ಮುಟ್ಟಿಸಿದ್ದರು. ಇದರಿಂದ ಶಿವಮೊಗ್ಗ ನಗರದಲ್ಲಿ ಹೆಣ್ಮಕ್ಕಳು ನಿಟ್ಟುಸಿರು ಬಿಟ್ಟಿದ್ದರು.

ಈಗೇನು ಮಾಡುತ್ತಿದೆ ಓಬವ್ವ ಪಡೆ?

ಮೂರ್ನಾಲ್ಕು ತಿಂಗಳಿಂದ ಈಚೆಗೆ ಓಬವ್ವ ಪಡೆ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಪರೂಪಕ್ಕೊಮ್ಮೆ ಪಡೆಯ ಜೀಪು ರಸ್ತೆಗಿಳಿಯುತ್ತದೆ. ಇದರಿಂದ ಬೀದಿ ಕಾಮಣ್ಣರು ಪುನಃ ಬಾಲ ಬಿಚ್ಚಿದ್ದಾರೆ. ‘ಪಿಸಿಆರ್ ವಾಹನಗಳು ಇಲ್ಲದ ಸಂದರ್ಭ ಓಬವ್ವ ಪಡೆ ಕಾರ್ಯನಿರ್ವಹಿಸ್ತಿತ್ತು. ಈಗ ಓಬವ್ವ ಪಡೆ ಬದಲಾಗಿ 7 ಪಿಸಿಆರ್ ವಾಹನಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಇವು ಬಂದ ಮೇಲೆ ಸಮಾಜಘಾತುಕ ಚಟುವಟಿಕೆಗೆ ಬ್ರೇಕ್ ಬಿದ್ದಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ಆದರೆ, ಪ್ರತ್ಯೇಕ ಓಬವ್ವ ಪಡೆ ಇದ್ದರೆ ಸೂಕ್ತ ಎಂಬುದು ಮಹಿಳೆಯರ ಅಭಿಲಾಷೆಯಾಗಿದೆ.

READ ALSO :

ಶಿವಮೊಗ್ಗದಲ್ಲಿ ಮಧ್ಯರಾತ್ರಿಯಿಂದಲೇ ‘ರಾಜಕುಮಾರ’ನ ಅಬ್ಬರ

EXCLUSIVE | ಸ್ಟಾರ್ ನಟಿಯರ ಸರಿಸಾಟಿಯಾಗಿ ನಟಿಸಿದ್ದಾಳೆ ಶಿವಮೊಗ್ಗದ ಬಾಲನಟಿ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s