ಭದ್ರಾವತಿಯ 17 ಕಡೆ ಪೊಲೀಸರ ದಾಳಿ, ಮೀಟರ್​ ಬಡ್ಡಿ ದಂಧೆಕೋರರಿಗೆ ಶಾಕ್​

ಲೈವ್ ಕನ್ನಡ ಶಿವಮೊಗ್ಗ

ಮೀಟರ್ ಬಡ್ಡಿ (ಅಧಿಕ ಬಡ್ಡಿ) ಹಣಕಾಸು ವ್ಯವಹಾರ ನಡೆಸುತ್ತಿದ್ದ 17 ಲೇವಾದೇವಿಗಳ ಮನೆಗಳ ಮೇಲೆ, ಪೊಲೀಸರು ದಾಳಿ ನಡೆಸಿದ್ದಾರೆ. ಭದ್ರಾವತಿಯಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ದಾಳಿ ನಡೆದಿದೆ.


ಸಂಜೆ ಏಕಾಏಕಿ ದಾಳಿ ನಡೆಸಿದ ಪೊಲೀಸರು, ಅಪಾರ ಪ್ರಮಾಣದ ಖಾಲಿ ಚೆಕ್, ಪ್ರೋನೋಟ್, ಛಾಪಾ ಕಾಗದ, ವಾಹನಗಳ ದಾಖಲಾತಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಇನ್ನೂ ಮುಂದುವರೆದಿದೆ.


ಕಾರ್ಯಾಚರಣೆ ನಡೆದಿದ್ದು ಹೇಗೆ?

ಮೀಟರ್ ಬಡ್ಡಿ, ಚಕ್ರ ಬಡ್ಡಿ ದಂಧೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿರುವು ಹೊಸತೇನಲ್ಲ. ದಂಧೆಕೋರರಿಗೆ ಬಿಸಿ ಮುಟ್ಟಿಸುವ ಸಲುವಾಗಿ, ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರ ಮಾರ್ಗದರ್ಶನದಲ್ಲಿ, ದಾಳಿ ನಡೆಸಲಾಗಿದೆ. ದಾಳಿಗೆ 17 ತಂಡಗಳನ್ನು ಮಾಡಲಾಗಿತ್ತು.


ಭದ್ರಾವತಿಯ ಡಿವೈಎಸ್ಪಿ ಉದೇಶ್, ಡಿಸಿಬಿ ಇನ್ಸ್ಪೆಕ್ಟರ್ ಕುಮಾರ್, ಡಿ.ಎಸ್.ಬಿ ಇನ್ಸ್ಪೆಕ್ಟರ್ ಮುತ್ತಣ್ಣಗೌಡರು, ಡಿಸಿಆರ್ಬಿ ಇನ್ಸ್ಪೆಕ್ಟರ್ ಮಂಜುನಾಥ್, ಭದ್ರಾವತಿ ಗ್ರಾಮಾಂತರ ಸಿಪಿಐ ವೆಂಕಟೇಶ್, ಭದ್ರಾವತಿ ನಗರ ಠಾಣೆ ಸಿಪಿಐ ವರದರಾಜ್ ಹಾಗೂ ಹತ್ತುಜನ ಪಿಎಸ್ಐಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.


ಎಲ್ಲೆಲ್ಲಿ ದಾಳಿ?

ಲಾಟರಿ ಸುರೇಶ, ಲಾಟರಿ ರಾಜು, ಕೋಟಿಚಂದ್ರು, ಸುಧಾ, ಹೆಬ್ಬಂಡಿ ಗಂಗಾಧರ, ಉಗ್ರಪ್ಪ, ಕೃಷ್ಣಪ್ಪ, ಶಂಕರೇ ಗೌಡ, ಎಂಪಿಎಂ ಉದ್ಯೋಗಿ ಕಾಳಪ್ಪ, ಅಶೋಕ, ಧನು, ಪ್ರಕಾಶ, ಮಂಜುನಾಥ ಅಲಿಯಾಸ್ ಮಂಜ, ಅಂಗಡಿ ಚಂದ್ರಮ್ಮ, ಶೇಖರಪ್ಪ, ಅಜೇಯ ಮತ್ತು ಡೊಳ್ಳು ಸೀನ ಮನೆ ಮೇಲೆ ಏಕಕಾಲಕ್ಕೆ ದಾಳಿ ಆಗಿದೆ.

Advertisements

5 comments

  1. I’m happy to say that our police dept had made this and helping people an i expect more and more from shivamogga police dept.

    Like

  2. This is a nice step towards eradication of money laundering business by which rich became richer & poor getting poorer.
    Salute the DC for his strong guts, hope he will keep doing good work for people of bdvt & remain undisturbed till end of his term.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s