ಶಿವಮೊಗ್ಗದಲ್ಲಿ ಮಧ್ಯರಾತ್ರಿಯಿಂದಲೇ ‘ರಾಜಕುಮಾರ’ನ ಅಬ್ಬರ

ಲೈವ್ ಕನ್ನಡ ಶಿವಮೊಗ್ಗ

ರಾಜ್ಯವ್ಯಾಪಿ ರಾಜಕುಮಾರನ ಅಬ್ಬರ. ಖುಷಿಯಿಂದ ಕುಣಿದು ಕುಪ್ಪಳಿಸಿದ ಅಪ್ಪು ಫ್ಯಾನ್ಸ್. ಶಿವಮೊಗ್ಗದಲ್ಲಿ ಮಧ್ಯರಾತ್ರಿಯಿಂದಲೇ ಕೇಳುತ್ತಿದೆ ‘ಬೊಂಬೆ ಹಾಡು’.

ಪವರ್ ಸ್ಟಾರ್ ಪುನಿತ್ ರಾಜ್ಕುಮಾರ್ ಅಭಿನಯದ ‘ರಾಜಕುಮಾರ’ ಸಿನಿಮಾ ರಾಜ್ಯವ್ಯಾಪಿ ತೆರೆ ಕಂಡಿದೆ. ಶಿವಮೊಗ್ಗದಲ್ಲೂ ರಾಜಕುಮಾರನ ಖದರ್ ಜೋರಾಗಿದೆ. ನಗರದ ಎರಡು ಥಿಯೇಟರ್ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಎರಡೂ ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.

ಮಧ್ಯರಾತ್ರಿಯಿಂದಲೇ ಶೋ ಶುರು

ಮಧ್ಯರಾತ್ರಿ ಅಭಿಮಾನಿಗಳ ಸಂಭ್ರಮ

ಬಿಡುಗಡೆಯ ದಿನವಾಗಿದ್ದರಿಂದ, ಗೋಪಿ ಸರ್ಕಲ್ನ ಮಲ್ಲಿಕಾರ್ಜುನ ಥಿಯೇಟರ್ನಲ್ಲಿ ಎರಡು ವಿಶೇಷ ಶೋಗಳನ್ನು ಏರ್ಪಡಿಸಲಾಗಿತ್ತು. ಮಧ್ಯರಾತ್ರಿ 1 ಗಂಟೆ ಮತ್ತು ಬೆಳಗ್ಗೆ 6ಕ್ಕೆ ಸ್ಪೆಷಲ್ ಶೋಗಳಿದ್ದವು. ಎರಡೂ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಪ್ರದರ್ಶನ ಅರಂಭಕ್ಕೂ ಮುಂಚೆ, ಚಿತ್ರಮಂದಿರದ ಹೊರಗೆ ಪವರ್ ಸ್ಟಾರ್ ಪವರಾಗಿ ಘೋಷಣೆ ಮೊಳಗಿದವು. ಡೊಳ್ಳು, ತಮಟೆ ಸದ್ದಿಗೆ ಅಪ್ಪು ಫ್ಯಾನ್ಸ್ ಹೆಜ್ಜೆ ಹಾಕಿದರು.

ಸ್ಕ್ರಿನ್ ಮುಂದೆ ಅಪ್ಪು ಜೊತೆ ಫ್ಯಾನ್ಸ್ ಡಾನ್ಸ್

ಮಧ್ಯರಾತ್ರಿಯಿಂದಲೇ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು, ಚಿತ್ರ ಪ್ರದರ್ಶನ

ಚಿತ್ರ ನೋಡಲು ಬರುವವರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದ ಅಪ್ಪು ಫ್ಯಾನ್ಸ್

ಆರಂಭವಾಗುತ್ತಿದ್ದಂತೆ, ಸ್ಕ್ರೀನ್ ಮುಂದೆ ಬಂದರು. ಪುನಿತ್ ರಾಜ್ ಕುಮಾರ್ ಎಂಟ್ರಿ ಸೀನ್ಗೆ ಶಿಳ್ಳೆ, ಚಪ್ಪಾಳೆ, ಘೋಷಣೆ ಮೊಳಗಿಸಿದರು. ಅಪ್ಪು ಜೊತೆಗೆ ಹಾಡುಗಳಿಗೆ ತಾವೂ ಹೆಜ್ಜೆ ಹಾಕಿದರು.

ನಿಂತು ಸಿನಿಮಾ ನೋಡಿ ಸಂಭ್ರಮಿಸಿದರು

ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು, ಏಕಾಏಕಿ ಚಿತ್ರಮಂದಿರದೊಳಗೆ ನುಗ್ಗಿದ್ದರಿಂದ, ಕುಳಿತು ಚಿತ್ರ ನೋಡುವುದಕ್ಕೆ ಸಾದ್ಯವಾಗಲಿಲ್ಲ. ಕೆಲವರು ನಿಂತೇ ಚಿತ್ರ ವೀಕ್ಷಿಸಿ ಪುಳಕಿತರಾದರು. ನಾಳೆಯಿಂದ ಬೆಳಗ್ಗೆ 11ರಿಂದ ಪ್ರದರ್ಶನ ಆರಂಭವಾಗಲಿದೆ.

Advertisements

2 comments

  1. ಸೂಪರ್ ಮೂವಿಸ್ ಕುಟುಂಬ ಸಮೇತ ನೋಡುವ ಅ0ತ ರಾಜ್ ಕುಮಾರ್

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s