ಶಿವಮೊಗ್ಗ | ‘ಪ್ರೀತಿ’ಗಾಗಿ ಬರುತ್ತಾರಾ ಪವರ್​ ಸ್ಟಾರ್​?

ಲೈವ್ ಕನ್ನಡ ಶಿವಮೊಗ್ಗ

ಬೊಂಬೆ ಕೇಳುತೈತೆ, ‘ರಾಜಕುಮಾರ’ನ ದಾರಿ ಕಾಯುತೈತೆ

ಸಾವು, ಬದುಕಿನ ಹೋರಾಟದಲ್ಲೂ, ದೊಡ್ಮನೆ ಹುಡುಗನನ್ನು ಕಾಣಬೇಕೆಂಬ ತವಕ. ಆಟ, ಪಾಠದ ವಯಸ್ಸಲ್ಲಿ ಹಾಸಿಗೆ ಹಿಡಿದಿದ್ದರೂ, ಅಪ್ಪು ಸರ್ ಜೊತೆ ಮಾತನಾಡಬೇಕು ಎಂಬ ಹಂಬಲ. ತನ್ನ ನೋವನ್ನೆಲ್ಲ ನುಂಗಿ, ನಟ ಪುನಿತ್ ರಾಜ್ಕುಮಾರ್ ಅವರ ಹುಟ್ಟುಹಬ್ಬಕ್ಕೆ ಈಕೆ ಶುಭ ಕೋರುತ್ತಿದ್ದರೆ, ಎಂತಹ ಕಲ್ಲು ಹೃದಯವಾದರೂ ಕರಗದೆ ಉಳಿಯುವುದಿಲ್ಲ. ಇದು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲಾಗಿರುವ, ಪ್ರೀತಿಯ ಕಥೆ.

ಯಾರ ಕೆಂಗಣ್ಣು ಬಿತ್ತೋ..

ವಯಸ್ಸಿನ್ನೂ ಹದಿಮೂರು. ಏಳನೇ ಕ್ಲಾಸ್ ಓದುತ್ತಿದ್ದಾಳೆ, ಪ್ರೀತಿ. ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕಣಸಲ್ ಬಡಾವಣೆಯ ನಿವಾಸಿ. ತಂದೆ ಕುಮಾರ್, ರಸ್ತೆ ಬದಿಯಲ್ಲಿ ಇಸ್ತ್ರಿ ಮಾಡುತ್ತಾರೆ. ತಾಯಿ ಮಂಜುಳಾ ಮನೆಗೆಲಸ ಮಾಡುತ್ತಿದ್ದಾರೆ. ಕಿತ್ತು ತಿನ್ನುವ ಬಡತನವಿದ್ದರೂ, ನೆಮ್ಮದಿ, ಸಂತೋಷಕ್ಕೆ ಕೊರತೆ ಇರಲಿಲ್ಲ. ಈ ಸುಖಿ ಕುಟುಂಬದ ಮೇಲೆ ಯಾರ ಕೆಂಗಣ್ಣು ಬಿತ್ತೋ ಗೊತ್ತಿಲ್ಲ, ಕುಮಾರ್ ಮತ್ತು ಮಂಜುಳಾ ದಂಪತಿಯ ಎರಡನೇ ಮಗಳು, ಪ್ರೀತಿಯ ಎರಡು ಕಿಡ್ನಿ ಕೆಲಸ ನಿಲ್ಲಿಸಿಬಿಟ್ಟವು. ಅಂದಿನಿಂದ ನಿರಂತರ ಡಯಾಲಿಸಿಸ್ ನಡೆಯುತ್ತಿದೆ.

ನಿರಂತರ ಡಯಾಲಿಸಿಸ್

‘ತಲೆನೋವಿನಿಂದ ಬಳಲುತ್ತಿದ್ದರಿಂದ, ವೈದ್ಯರ ಬಳಿ ಕೊರೆದೊಯ್ದೆವು. ಪರೀಕ್ಷೆ ನಡೆದಾಗ ಕಿಡ್ನಿ ವೈಫಲ್ಯವಾಗಿರುವುದು ತಿಳಿದು ಬಂತು. ಮಂಗಳೂರು, ಬೆಂಗಳೂರು ಸೇರಿದಂತೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿಗೆಲ್ಲ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು..’ ಎಂದು ಗದ್ಗದಿತರಾಗುತ್ತಾರೆ ತಾಯಿ ಮಂಜುಳ. ಸದ್ಯ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಚಕಿತ್ಸೆ ನಡೆಯುತ್ತಿದ್ದು, ‘ಯಾರಾದರೂ ಕಿಡ್ನಿ ದಾನ ಮಾಡಿದರೆ, ಪ್ರೀತಿಗೆ ಕಿಡ್ನಿ ಕಸಿ ಮಾಡಬಹುದು’ ಅನ್ನುತ್ತಾರೆ ಡಾ.ಅರುಣ್.

ಅಪ್ಪು ಸರ್ ನೋಡಬೇಕು

ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಂದರೆ ಪ್ರೀತಿಗೆ ಪ್ರೀತಿ. ‘ಚಿಕ್ಕ ವಯಸ್ಸಿನಿಂದ ಅವರ ಸಿನಿಮಾ ನೋಡುತ್ತಿದ್ದೇನೆ. ಅವರೆಂದರೆ ನನಗೆ ಇಷ್ಟ. ಅವರನ್ನು ನೋಡಬೇಕು, ಮಾತನಾಡಬೇಕು’ ಎಂದು ಆಕೆ ಅಭಿಲಾಷೆ ವ್ಯಕ್ತಪಡಿಸುತ್ತಿದ್ದರೆ, ಆಸ್ಪತ್ರೆ ಸಿಬ್ಬಂದಿಯೂ ಮೌನವಾಗುತ್ತಾರೆ. ಪುನಿತ್ ರಾಜ್ಕುಮಾರ್ ಅವರಿಗೂ ಮಕ್ಕಳಂದರೆ ಪ್ರೀತಿ. ‘ರಾಜಕುಮಾರ’ ಸಿನಿಮಾದ ಮೇಕಿಂಗ್ ವಿಡಿಯೋ ಕೂಡ, ಇದನ್ನು ಸಾಬೀತುಪಡಿಸುತ್ತದೆ. ಹಾಗಾಗಿ, ಪ್ರೀತಿಯ ಆಸೆಯನ್ನು ಅಪ್ಪು ಈಡೇರಿಸುತ್ತಾರೆ ಎಂಬ ನಂಬಿಕೆ ಎಲ್ಲರದ್ದಾಗಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s