EXCLUSIVE : ವೀಕೆಂಡ್ ವಿಥ್​ ರಮೇಶ್​​ ಮೊದಲ ಎಪಿಸೋಡ್ ಕಂಪ್ಲೀಟ್​, ಸಾಧಕರ ಸೀಟ್​ನಲ್ಲಿ ಯಾರೆಲ್ಲ ಕೂರುತ್ತಾರೆ ಗೊತ್ತಾ?

ಲೈವ್ ಕನ್ನಡ ಶಿವಮೊಗ್ಗ

ರಾಜ್ಯಾದ್ಯಂತ ಮತ್ತೆ ವೀಕೆಂಡ್ ಜ್ವರ ಶುರುವಾಗಿದೆ. ಕಾಮಿಡಿ ಕಿಲಾಡಿಗಳು ನಂತರ ಜೀ ಕನ್ನಡ ಚಾನೆಲ್, ವೀಕೆಂಡ್ ವಿಥ್ ರಮೇಶ್ ಸೀಸನ್ 3 ಆರಂಭಿಸುತ್ತಿದೆ. ಈಗಾಗಲೇ ಅದರ ಪ್ರೋಮೊ ಹೊರಬಿದ್ದಿದ್ದು, ಮುಂದಿನ ವಾರದಿಂದ ಶೋ ಪ್ರಸಾರ ಆಗಲಿದೆ. ಈ ಬಾರಿ ಸಾಧಕರ ಸೀಟ್ಲ್ಲಿ ಯಾರು ಯಾರೆಲ್ಲ ಕೂರುತ್ತಾರೆ ಅನ್ನುವ ಕ್ಯೂರಿಯಾಸಿಟಿ ವೀಕ್ಷಕರನ್ನು ಕಾಡುತ್ತಿದೆ. ಇದರ EXCLUSIVE ಮಾಹಿತಿ ಲೈವ್ ಕನ್ನಡ ಶಿವಮೊಗ್ಗಕ್ಕೆ ಲಭ್ಯವಾಗಿದೆ. (ಶಿವಮೊಗ್ಗದ ಕಂಪ್ಲೀಟ್ ಅಪ್ಡೇಟ್ಸ್ |ಕ್ಲಿಕ್ ಮಾಡಿ ಲೈಕ್ ಮಾಡಿ.. Click Here)

ಸೀಸನ್ 3ಯ ಸಾಧಕರ ಸೀಟ್ ಮೇಲೆ ಮೊದಲು ಕುಳಿತವರು, ಬಹುಭಾಷಾ ನಟ ಪ್ರಕಾಶ್ ರಾಜ್. ಈಗಾಗಲೇ ಪ್ರಕಾಶ್ ರಾಜ್ ಅವರ ಎಪಿಸೋಡ್ ಕಂಪ್ಲೀಟ್ ಆಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ನವರಸ ನಾಯಕ ಜಗ್ಗೇಶ್ ಅವರ ಕುರಿತು ರೀಸರ್ಚ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಕಳೆದೆರಡು ಸೀಸನ್ಗಳಂತೆಯೇ, ಈ ಬಾರಿಯೂ ವೀಕೆಂಡ್ ವಿಥ್ ರಮೇಶ್ ಎಂಟರ್ಟೈನ್ಮೆಂಟ್ನ ಜೊತೆಗೆ ನಮ್ಮ ನಡುವಿನ ಸಾಧಕರ ನೋವು, ನಲಿವುಗಳನ್ನು ಬಿಚ್ಚಿಡಲಿದೆ.

ಬೆಳೆಯುತ್ತಿದೆ ಬೇಡಿಕೆ

ಸಾಧಕರ ಸೀಟ್ಲ್ಲಿ ನೀವು ಯಾರನ್ನು ನೋಡಬಯಸುತ್ತೀರ ಎಂದು ಜೀ ಕನ್ನಡ ವಾಹಿನಿ ತನ್ನ ಫೇಸ್ಬುಕ್ ಅಕೌಂಟನಲ್ಲಿ ಪ್ರಶ್ನೆ ಮಾಡಿತ್ತು. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದು, ಶಿವಮೊಗ್ಗದ ಹಿಂದಿನ ಜಿಲ್ಲಾ ರಕ್ಷಣಾಧಿಕಾರಿ ರವಿ ಡಿ.ಚನ್ನಣ್ಣನವರ್, ಹಿರಿಯ ಪತ್ರಕರ್ತ ರಂಗನಾಥ್ ಭಾರದ್ವಜ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ ಹಲವರ ಹೆಸರುಗಳನ್ನು ಕಮೆಂಟ್ ಮಾಡಿದ್ದಾರೆ. ವೀರ ಮರಣವನ್ನಪ್ಪಿದ ಯೋಧರ ಕುಟುಂಬವನ್ನು ಕರೆಸಬೇಕು ಎಂದೂ ಪ್ರೇಕ್ಷಕರು ಮನವಿ ಮಾಡಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s