ಬಜೆಟ್​ 2017 : ಸಿಎಂಗೆ ದಾಖಲೆ, ಶಿವಮೊಗ್ಗ ಜಿಲ್ಲೆಗೆ ಭಾರೀ ನಿರಾಸೆ

ಲೈವ್ ಕನ್ನಡ ಶಿವಮೊಗ್ಗ

ಹನ್ನೆರಡನೇ ಬಾರಿ ಬಜೆಟ್ ಮಂಡಿಸಿ, ದಾಖಲೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿವಮೊಗ್ಗದ ಪಾಲಿಗೆ ನಿರಾಸೆ ಮೂಡಿಸಿದ್ದಾರೆ. ಜಿಲ್ಲೆಯ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಈ ಬಾರಿಯೂ ಅವರು ವಿಫಲರಾಗಿದ್ದಾರೆ. ನೂತನ ತಾಲೂಕು ರಚನೆ, ಮೂಲ ಸೌಕರ್ಯ, ಕೈಗಾರಿಕೆ, ಕೃಷಿ ಸೇರಿದಂತೆ, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಜಿಲ್ಲಗೆ ನಿರಾಸೆ ಆಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. (ಶಿವಮೊಗ್ಗದ ಕಂಪ್ಲೀಟ್ ಅಪ್ಡೇಟ್ಸ್ |ಕ್ಲಿಕ್ ಮಾಡಿ ಲೈಕ್ ಮಾಡಿ.. Click Here)

ಜಿಲ್ಲೆಗೆ ಸಿಕ್ಕಿದ್ದೇನು?

 1. ಶಿವಮೊಗ್ಗಕ್ಕೆ KSRTC ವಿಭಾಗ ಘೋಷಣೆ : ಶಿವಮೊಗ್ಗ, ಭದ್ರಾವತಿ, ಸಾಗರ ಮತ್ತು ಹೊನ್ನಾಳಿ KSRTC ಡಿಪೋಗಳನ್ನು ಸೇರಿಸಿ ವಿಭಾಗ ಮಂಜೂರು
 2. ರಾಜ್ಯದ ಆರು ಸ್ಮಾರ್ಟ್ ಸಿಟಿಗಳ ಕಾರ್ಯಾರಂಭಕ್ಕೆ 800 ಕೋಟಿ ರೂ. ಶಿವಮೊಗ್ಗವೂ ಈ ಪಟ್ಟಿಯಲ್ಲಿರುವುದರಿಂದ ಸುಮಾರು 130 ಕೋಟಿ ರೂ. ನಗರಕ್ಕೆ ಲಭಿಸಲಿದೆ.
 3. ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಗೆ 60 ಕೋಟಿ ರೂ. ಅನುದಾನ (ಮಂಡಳಿ ವ್ಯಾಪ್ತಿಯ 16 ಜಿಲ್ಲೆಗೆ ಹಂಚಿದರೆ, ಶಿವಮೊಗ್ಗಕ್ಕೆ ದಕ್ಕುವುದು ಬಿಡುಗಾಸು ಮಾತ್ರ)

ಜಿಲ್ಲೆಗೆ ಸಿಗಬೇಕಿದ್ದಿದ್ದೇನು?

ಶಿವಮೊಗ್ಗ

 1. ಸೋಗಾನೆ ಬಳಿ ಅರ್ಧಕ್ಕೆ ನಿಂತಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನದ ನಿರೀಕ್ಷೆ ಇತ್ತು.
 2. ಸೋಗಾನೆಯಲ್ಲಿನ ಕೈಗಾರಿಕಾ ವಸಾಹತು ಸ್ಥಾಪನೆಗೆ ನೆರವು ಸಿಕ್ಕಿಲ್ಲ.
 3. ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಸ್ಥಾಪನೆ.
 4. ನೆನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಗೆ ಅನುದಾನವಿಲ್ಲ.
 5. ಶಿವಮೊಗ್ಗ – ಹರಿಹರ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಗೆ, ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಘೋಷಣೆ ಮಾಡಬೇಕಿತ್ತು. ಆದರೆ ಅದು ಅಗಿಲ್ಲ.
 6. ಕುಂಸಿಯನ್ನು ತಾಲೂಕು ಮಾಡಬಹುದು ಎಂಬ ನಿರೀಕ್ಷೆ ಬಜೆಟ್ ಪುಸ್ತಕದಲ್ಲಿ ಜಾಗ ಪಡೆದುಕೊಂಡಿಲ್ಲ.

ಭದ್ರಾವತಿ

 1. ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾರ್ಖಾನೆಯ ಪುನಶ್ಚೇತನದ ಪ್ರಸ್ತಾಪವಿಲ್ಲ.
 2. ಎಂಪಿಎಂ ಕಾರ್ಮಿಕರಿಗೆ ಪುನರ್ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮತ್ತು ಕಡಿಮೆ ಆಗಿರುವ ನಿವೃತ್ತಿ ವೇತನ ಕುರಿತು ಬಜೆಟ್ನಲ್ಲಿ ಪ್ರಸ್ತಾಪವಾಗುವ ಭರವಸೆ ಈಡೇರಿಲ್ಲ. ಈ ಕುರಿತು ಮಾ.21ರಂದು ಎಂಪಿಎಂ ಕಾರ್ಮಿಕರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
 3. ವಿಐಎಸ್ಎಲ್ಗೆ ಗಣಿ ಮಂಜೂರು ಮಾಡುವ ಪ್ರಸ್ತಾವನೆ ಆಗಲಿಲ್ಲ.
 4. ಹೊಳೆಹೊನ್ನೂರನ್ನು ತಾಲೂಕು ಮಾಡುವ ಪ್ರಸ್ತಾಪವೇ ಇಲ್ಲ. ಈ ಕುರಿತು ಸ್ಥಳೀಯರು ಪಾದಯಾತ್ರೆ ಮಾಡಿ, ಆಗ್ರಹಿಸಿದ್ದು ಫಲ ಕೊಟ್ಟಿಲ್ಲ.

ಸಾಗರ

 1. ಹೊನ್ನಾವರ – ತಾಳಗುಪ್ಪ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಈಡೇರಿಲ್ಲ.
 2. ವಿಶ್ವಪ್ರಸಿದ್ಧ ಜೋಗ ಜಲಪಾತವನ್ನು ಸರ್ವಋತು ಜಲಪಾತ ಮಾಡುವ ಘೋಷಣೆ, ಮೈಸೂರು ಬೃಂದಾವನ ಮಾದರಿ ಪಾರ್ಕ್
 3. ಸ್ಥಾಪನೆಯ ಆಶ್ವಾಸನೆಗಳೂ ಬಜೆಟ್ನಲ್ಲಿ ಜಾಗ ಪಡೆದಿಲ್ಲ.
 4. ಆನಂದಪುರವನ್ನು ತಾಲೂಕು ಮಾಡಬಹುದು ಎಂಬ ಚಿಂತನೆಗೆ ಆಯವ್ಯಯದಲ್ಲಿ ಕಿಮ್ಮತ್ತು ಸಿಕ್ಕಿಲ್ಲ.

ತೀರ್ಥಹಳ್ಳಿ

 1. ಅಡಕೆಗೆ ಬೆಂಬಲ ಬೆಲೆ ಘೋಷಿಸಬಹುದು ಎಂಬ ಬೆಳೆಗಾರರ ನಿರೀಕ್ಷೆಗೆ ಬಜೆಟ್ ತಣ್ಣೀರು ಎರಚಿದೆ.

ಸೊರಬ

 1. ಆನವಟ್ಟಿಯನ್ನು ತಾಲೂಕು ಮಾಡಬಹುದು ಎಂಬ ವಿಶ್ವಾಸ ಮರೆಯಾಗಿದೆ.

ಶಿಕಾರಿಪುರ

 1. ಉಡುಗಣಿ – ತಾಳಗುಂದ ಹೋಬಳಿಗಳ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ಹರಿಸುವ ಯೋಜನೆಯ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವಿಲ್ಲ.

ಇದಿಷ್ಟೇ ಅಲ್ಲ. ಜಿಲ್ಲೆಯ ಮೂಲಸೌಕರ್ಯ ವೃದ್ಧಿಗೆ ವಿಶೇಷ ಯೋಜನೆ ಮತ್ತು ಅನುದಾನವನ್ನು ಬಿಡುಗಡೆ ಮಾಡಬಹುದಿತ್ತು. ಆದರೆ ಯಾವುದಕ್ಕೂ ಈ ಬಾರಿಯ ಬಜೆಟ್ನಲ್ಲಿ ಜಾಗ ಲಭಿಸಿಲ್ಲ.

ಸಿದ್ದರಾಮಯ್ಯ ಅವರು ಮಂಡಿಸಿದ, 245 ಪುಟದ ಬಜೆಟ್ ಪ್ರತಿಯಲ್ಲಿ, ಶಿವಮೊಗ್ಗದ ಹೆಸರು ಪ್ರಸ್ತಾಪ ಆಗಿರುವುದು ಕೇವಲ ಐದು ಬಾರಿ. ಈ ಪೈಕಿ ನಾಲ್ಕು ವರ್ಷದ ಸಾಧನೆಯ ಪಟ್ಟಿಯಲ್ಲಿ ಮೂರು ಬಾರಿ ಜಿಲ್ಲೆಯ ಹೆಸರು ಉಲ್ಲೇಖವಾಗಿದ್ದರೆ, ಯೋಜನೆಗಳ ವಿಚಾರದಲ್ಲಿ ಎರಡು ಬಾರಿಯಷ್ಟೇ ಶಿವಮೊಗ್ಗದ ಹೆಸರು ಬಂದು ಹೋಗಿದೆ.

Advertisements

One comment

 1. ಏನು ಬಜೆಟ್ ಮಂಡನೆ ಮಾಡಿದ್ರ್ ಅಂತನೇ ಗೊತ್ತಾಗ್ತಿಲ್ಲಾ.ನಿರಾಸೆಯ ಬಜೆಟ್ ಅಂತನೇ ಹೇಳ್ಬೋದು.ತಾಯಿಗೆ ಹಾಲು ಕುಡಿಸು ಎಂದು ಕೇಳಿದರೆ ಕಲ್ಲೀಹಾಲು ಕೊಟ್ಟಳಂತೆ ಆ ರೀತಿ ಬಜೆಟ್ ಇದೆ.ಸಿದ್ದರಾಮಯ್ಯ ನವರ ಸಾರಕಾರ ಪ್ರಾದೇಶಿಕ ಅಸಮತೋಲನ ಮಾಡುತ್ತಿದೆ ಎಂದು ಮೇಲಿನ ಲೇಖನವನ್ನು ನೋಡಬಹುದು

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s