​ಮತ್ತೆ ಮನಬಿಚ್ಚಿ ಹಾಡಿದ ಸುಹಾನಾ, ಸಾಗರದ ತವರೂರಿನಲ್ಲಿ ಇವರದ್ದೇ ಗುಣಗಾನ

ಲೈವ್​ ಕನ್ನಡ ಶಿವಮೊಗ್ಗ
ಜೀ ಕನ್ನಡದ ಸರಿಗಮಪ ವೇದಿಕೆ ಮೇಲೆ, ಮತ್ತೆ ಸುಹಾನಾ ಸಯ್ಯದ್​ ಗಾನಲಹರಿ. ದಿಟ್ಟೆಯ ಹಾಡು ಕೇಳಿ, ತಲೆದೂಗಿದ ರಾಜ್ಯದ ಜನತೆ. ತವರೂರಿಗೆ ಗಾನ ಕೋಗಿಲೆ ಮೇಲೆ ಇಮ್ಮಡಿಯಾಗಿದೆ ಅಭಿಮಾನ. 

ಸುಹಾನಾ ಸಯ್ಯದ್, ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಈ ಸೀಜನ್​ನ ಕಂಟೆಸ್ಟೆಂಟ್​. ಕ್ವಾಲಿಫಿಕೇಷನ್​ ರೌಂಡ್​ನಲ್ಲಿ, ದೇವರ ನಾಮ ಹಾಡಿದ್ದರು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದು, ವಿವಾದವಾಗಿತ್ತು. ಆ ಬಳಿಕ ಸುಹಾನಾ ಹಾಡುವುದಿಲ್ಲವೇನೋ ಎಂಬ ಅನುಮಾನಕ್ಕೆ, ನಿನ್ನೆಯ ಸರಿಗಮಪ ಎಪಿಸೋಡ್​ ಕೊನೆ ಹಾಡಿದೆ. 

ತವರೂರಿನಲ್ಲಿ ಇಮ್ಮಡಿಯಾಯ್ತು ಅಭಿಮಾನ

ಸುಹಾನಾ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆಯವರು. ಸುಮಾರು ನೂರು ವರ್ಷದಿಂದ ಇವರ ಕುಟುಂಬ ಇಲ್ಲಿ ನೆಲೆಸಿದೆ. ತಂದೆ, ತಾಯಿ ಇಬ್ಬರೂ ಶಿಕ್ಷಕರು. ಸುಹಾನಾಗೆ ಸಂಗೀತದ ಕುರಿತು ಆಸಕ್ತಿ ಬೆಳೆದಿದ್ದೇ, ಅವರ ತಾಯಿಯಿಂದ.

ಮಲೆನಾಡಿನ ಎಲ್ಲಾ ಗ್ರಾಮಗಳ ಹಾಗೇ, ಭೀಮನಕೋಣೆಯಲ್ಲೂ ಸೌಹಾರ್ದತೆ ಇದೆ. ಇದೇ ವಾತಾವರಣದಲ್ಲಿ ಬೆಳೆದ ಸುಹಾನಾ ಅವರ ಮನಸಲ್ಲೂ ಜಾತಿ, ಧರ್ಮದ ಬೇಧವಿಲ್ಲ ಎಂದು ಅಭಿಮಾನ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು. ಇಲ್ಲಿಯ ಸ್ವರಾಂಜಲಿ ಎಂಬ ಸಂಸ್ಥೆಯ ಸಕ್ರಿಯ ಸದಸ್ಯೆಯಾಗಿರುವ ಸುಹಾನಾ, ಎಲ್ಲಾ ಕಾರ್ಯಕ್ರಮಗಳಲ್ಲೂ ಖುಷಿಯಿಂದಲೇ ಪಾಲ್ಗೊಳ್ಳುತ್ತಾರೆ. ಗ್ರಾಮದ ಎಲ್ಲಾ ಕಾರ್ಯಕ್ರಮದಲ್ಲೂ ಇವರದ್ದೇ ಪ್ರಾರ್ಥನಾ ಗೀತೆ ಇರುತ್ತದೆ. 

ಸುಹಾನಾ, ಪ್ರಾಥಮಿಕ ಶಿಕ್ಷಣವನ್ನು ಭೀಮನಕೋಣೆಯಲ್ಲೇ ಮುಗಿಸಿದರು. ಸಾಗರದಲ್ಲಿ ಪಿಯುಸಿ ಪೂರೈಸಿ, ಇಂದಿರಾಗಾಂಧಿ ಪದವಿ ಕಾಲೇಜಿಲ್ಲಿ ಡಿಗ್ರಿ ಓದಿದ್ದರು. ಶಾಲಾ, ಕಾಲೇಜಿನಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭೇಷ್ ಅನಿಸಿಕೊಂಡಿದ್ದರು. 


ಸುಹಾನಾ ಅವರ ಮನೆ

ಸೌಮ್ಯ ಸ್ವಭಾವ, ಬಹುಮುಖಿ ವ್ಯಕ್ತಿತ್ವ
ಸುಹನಾ ಅವರದ್ದು ಸೌಮ್ಯ ಸ್ವಭಾವ. ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೊಂದಿಗೂ ಬೆರೆಯುತ್ತಾರೆ, ಗೌರವದಿಂದಲೇ ನಡೆದುಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಖುಷಿ ವ್ಯಕ್ತಪಡಿಸುತ್ತಾರೆ. ಸುಹನಾ ಗಾಯಕಿಯಷ್ಟೇ ಅಲ್ಲ, ರಂಗಭೂಮಿ ಕಲವಿದೆ. ಯಕ್ಷಗಾನವನ್ನೂ ಮಾಡಿದ್ದಾರೆ. ಬಹುಮುಖಿ ಪ್ರತಿಭೆ ಬೆಳಯುತ್ತಿರುವ ಪರಿ, ಊರಿಗೆ ಹೆಮ್ಮೆಯನ್ನುಂಟು ಮಾಡಿದೆ.

https://youtu.be/0lDXJj4hROg
Sudeep Praises Suhana

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s