ಕಿಚ್ಚ @ ಶಿವಮೊಗ್ಗ | ತವರಿನಲ್ಲಿ ಈಡೇರಿತಾ ಹೆಬ್ಬುಲಿಯ ಹೆಬ್ಬಯಕೆ?

ಲೈವ್ ಕನ್ನಡ ಶಿವಮೊಗ್ಗ

ಹೆಬ್ಬುಲಿ ಚಿತ್ರದ ಪ್ರಮೋಷನ್ಗಾಗಿ, ಕಿಚ್ಚ ಸುದೀಪ್, ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡಿದ್ದರು. ತಮ್ಮ ತವರು ಜಿಲ್ಲೆಯಲ್ಲೂ ಅಭಿನಯ ಚಕ್ರವರ್ತಿಗೆ, ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಶಿವಮೊಗ್ಗಕ್ಕೆ ಬರುವ ಮುನ್ನ, ಹೆಬ್ಬಯಕೆಯೊಂದನ್ನು ಟ್ವೀಟ್ ಮಾಡಿ, ತಮ್ಮ ಅಮ್ಮ ಮತ್ತು ಬಾಲ್ಯವನ್ನು ಮೆಲುಕು ಹಾಕಿದ್ದರು ಕಿಚ್ಚ.

ಶಿವಮೊಗ್ಗದ ವೆಂಕಟೇಶ್ವರ ಸ್ವೀಟ್ಸ್ನ ಮೈಸೂರು ಪಾಕ್ನ ಸವಿ ಸವಿಯಬೇಕು ಅನ್ನುವುದು ಸುದೀಪ್ ಅವರ ಬಯಕೆಯಾಗಿತ್ತು. ಈ ಕುರಿತು ಟ್ವೀಟ್ ಮಾಡಿ, ಹಲವರ ಬಾಯಲ್ಲಿ ನೀರೂರುವಂತೆಯೂ ಮಾಡಿದ್ದರು. ಕಿರಿಕ್ ಪಾರ್ಟಿ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಅವರೂ ಈ ಸಾಲಿಗೆ ಸೇರಿದ್ದರು..!

ಹೆಬ್ಬಯಕೆ ಈಡೇರಿತಾ?

ಮೊದಲೆಲ್ಲ ಸುದೀಪ್ ಅವರು ತಮ್ಮ ಅಂಗಡಿಗೆ ಬರುತ್ತಿದ್ದರು. ಈಗ ಅವರಿಗೆ ಕಷ್ಟವಾಗುತ್ತದೆ. ಆ ಕಾರಣಕ್ಕೆ ಸ್ನೇಹಿತರಿಗೆ ಹೇಳಿ ತರಿಸಿಕೊಳ್ಳುತ್ತಾರೆ. ಈ ಸರಿಯೂ ಗೆಳೆಯರಿಂದ ಮೈಸೂರು ಪಾಕ್ ತರಿಸಿಕೊಂಡಿರಬಹುದು ಎಂದು ಖುಷಿ ವ್ಯಕ್ತಪಡಿಸುತ್ತಾರೆ ವೆಂಕಟೇಶ್ವರ ಸ್ವೀಟ್ಸ್ನ ಮಾಲೀಕರಾದ ಪ್ರಸನ್ನ ವೆಂಕಟೇಶ್.

ನಮ್ಮ ತಿರುಮಲಾ ಲಾಡ್ಜ್ ಬ್ರಾಂಚ್ನಿಂದಲೇ ಅವರು ಯಾವಾಗಲೂ ಮೈಸೂರು ಪಾಕ್ ತರಿಸಿಕೊಳ್ಳುತ್ತಾರೆ. ಈಗಲೂ ಅಲ್ಲಿಂದಲೇ ತರಿಸಿಕೊಂಡಿರಬಹುದು. ಟ್ವೀಟ್ ಮಾಡಿದ ವಿಚಾರ ಕೇಳಿ ನಮಗೂ ಸಂತೋಷವಾಯಿತು ಅಂತಾರೆ, ವೆಂಕಟೇಶ್ವರ ಸ್ವೀಟ್ಸ್ನಲ್ಲೇ ಎರಡೂವರೆ ದಶಕದಿಂದ ಕಾರ್ಯನಿರ್ವಹಿಸುತ್ತಿರುವ ಚಂದ್ರಶೇಖರ್.

ವೆಂಕಟೇಶ್ವರ ಸ್ವೀಟ್ಸ್ನ ಮೈಸೂರು ಪಾಕ್ ಸವಿಯದವರೇ ಇಲ್ಲ. ಎಲ್.ಕೆ.ಅಡ್ವಾಣಿ, ಎಸ್.ಬಂಗಾರಪ್ಪ, ನಟ ಶಿವರಾಜ್ ಕುಮಾರ್ ಸೇರಿದಂತೆ, ನಗರಕ್ಕೆ ಬರುವ ಬಹುತೇಕ ರಾಜಕಾರಣಿಗಳು, ಸಿನಿಮಾ ತಾರೆಯರು, ಬಿಸಿ ಮೈಸೂರು ಪಾಕ್ಗೆ ಮಾರು ಹೋಗಿದ್ದಾರೆ. ಸುದೀಪ್ ಅವರಂತೆ, ನಗರಕ್ಕೆ ಆಗಮಿಸುವ ಬಹುತೇಕ ಸ್ಟಾರ್ಗಳು, ಇಲ್ಲಿಂದ ಮೈಸೂರು ಪಾಕ್ ತರಿಸಿಕೊಂಡು ರುಚಿ ನೋಡುತ್ತಾರೆ. 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s