ಕ್ರಷರ್​ಗಳ ವಿರುದ್ಧ ಸಿಡಿದೆದ್ದ ದೇವಕಾತಿಕೊಪ್ಪ, ಗ್ರಾಮಸ್ಥರ ಒಗ್ಗಟ್ಟಿಗೆ ಬೆದರಿದ ಕ್ವಾರಿಗಳು

ಲೈವ್ ಕನ್ನಡ ಶಿವಮೊಗ್ಗ

ಕೊನೆಗೂ ಗ್ರಾಮಸ್ಥರ ಸಹನೆಯ ಕಟ್ಟೆ ಒಡೆದಿದೆ. ಮಕ್ಕಳಿಂದ ಹಿರಿಯವರೆಗೆ ಎಲ್ಲರೂ ರಸ್ತೆಗಿಳಿದು ಲಾರಿ, ಟ್ರ್ಯಾಕ್ಟರ್ಗಳನ್ನು ತಡೆದರು. ಈ ಕೂಡಲೇ ಎಲ್ಲವೂ ಬಂದ್ ಆಗಬೇಕು ಎಂದು ಪಟ್ಟು ಹಿಡಿದರು. ತಮ್ಮ ಆರೋಗ್ಯ, ಮಾನಸಿಕ ನೆಮ್ಮದಿ ಹಾಳುಗೆಡವಿದವರ ವಿರುದ್ಧ ಆಕ್ರೋಶ ಹೊರಹಾಕಿದರು.

ಶಿವಮೊಗ್ಗ ತಾಲೂಕಿನ ದೇವಕಾತಿಕೊಪ್ಪದ ಗ್ರಾಮಸ್ಥರು, ತಮ್ಮೂರಿನ ಸುತ್ತಲೂ ನಡೆಯುತ್ತಿರುವ ಕಲ್ಲು ಕ್ವಾರಿಗಳು, ಕ್ರಷರ್ಗಳ ವಿರುದ್ಧ ಸಿಡಿದೆದ್ದಿದ್ದಾರೆ. ಅಕ್ರಮ ಮತ್ತು ಸಕ್ರಮ ಎರಡೂ ಬಗೆಯ ಕ್ವಾರಿಗಳು, ಕ್ರಷರ್ಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಲಾರಿ, ಟ್ರ್ಯಾಕ್ಟರ್ಗಳನ್ನು ತಡೆದು ಆಕ್ರೋಶ ಹೊರಹಾಕಿದರು.

ಧೂಳಾಯ್ತು ಗ್ರಾಮ, ಹದಗೆಟ್ಟಿದೆ ಜನರ ಆರೋಗ್ಯ

ಕ್ರಷರ್ ಮತ್ತು ಕ್ವಾರಿಗಳಿಂದ ಗ್ರಾಮ ಧೂಳು ಹಿಡಿದಿದೆ. ಪ್ರತಿದಿನ ಎಡೆಬಿಡದೆ ಲಾರಿ, ಟ್ರ್ಯಾಕ್ಟರ್ಗಳು ಸಂಚರಿಸುತ್ತಿವೆ. ಇದರಿಂದ ಗ್ರಾಮ ಧೂಳುಮಯವಾಗಿದೆ. ಜನರ ಆರೋಗ್ಯ ಹದಗೆಟ್ಟಿದೆ. ಪುಟ್ಟ ಮಕ್ಕಳೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ, 50ಕ್ಕೂ ಹೆಚ್ಚು ಲಾರಿಗಳು, 20ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳನ್ನು ತಡೆದಿದ್ದಾರೆ. ಸುಮಾರು 20 ಕ್ರಷರ್ಗಳಿಗೆ ಗ್ರಾಮಸ್ಥರೇ ಬೀಗ ಜಡಿದಿದ್ದಾರೆ. ಕೂಡಲೇ ಎಲ್ಲವೂ ಸ್ಥಗಿತವಾಗಬೇಕು ಎಂದು ಆಗ್ರಹಿಸಿದ್ದಾರೆ. ಕ್ರಷರ್, ಕ್ವಾರಿಗಳು ನಿಲ್ಲುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆಯನ್ನೂ ನೀಡಿ, ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಇಡೀ ಗ್ರಾಮವೇ ರಸ್ತೆಯಲ್ಲೇ ಉಳಿದಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s