ಕೈಗೆ ಗುಡ್​ ಬೈ, ಬಿಜೆಪಿಗೆ ಹಾಯ್​​, ಕುಮಾರ್​ ನಡೆಗೆ ಕಾರಣವೇನು? ಮುಂದೇನಾಗುತ್ತೆ?

ಮಾರ್ಚ್ 9ರಂದು ಕುಮಾರ್ ಬಂಗಾರಪ್ಪ ಬಿಜೆಪಿಗೆ

ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ

ಕುಮಾರ್ ಮಂದಿರುವ ಸವಾಲುಗಳೇನು? ಉದ್ಭವವಾಗಿರುವ ಪ್ರಶ್ನೆಗಳೇನು?

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆಯುವ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ ಜೊತೆಗಿನ ಎರಡು ದಶಕದ ಬಾಂಧವ್ಯ ಅಂತ್ಯಗೊಳಿಸುತ್ತಿರುವುದಾಗಿ ಖುದ್ದು ಕುಮಾರ್ ಬಂಗಾರಪ್ಪ ಅವರೇ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರ್ ಬಂಗಾರಪ್ಪ, ಕೆಪಿಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನನ್ನ ಈ ನಡೆಗೆ ಕಾರಣವೇನು ಎಂದು ಅಧ್ಯಕ್ಷರಿಗೆ ವಿವರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. (ರಾಜೀನಾಮೆ ಬಗ್ಗೆ ಕುಮಾರ್ ಬಂಗಾರಪ್ಪ ಹೇಳಿದ್ದೇನು? ವಿಡಿಯೋಗೆ ಕ್ಲಿಕ್ ಮಾಡಿ)

ಕಾಗೋಡು ವಿರುದ್ಧ ಪರೋಕ್ಷ ವಾಗ್ದಾಳಿ

ಕಾಂಗ್ರೆಸ್ ತೊರೆಯುತ್ತಿರುವುದಕ್ಕೆ ಕಾರಣಗಳನ್ನು ನೀಡಿದ ಕುಮಾರ್ ಬಂಗಾರಪ್ಪ, ಸಚಿವ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಶಿವಮೊಗ್ಗದ ಸಚಿವರು ತಮ್ಮ ವಿರುದ್ಧ ವೈರತ್ವ ಸಾಧಿಸುತ್ತಿದ್ದಾರೆ. ಇದಕ್ಕೆ ಇತಿಶ್ರೀ ಹಾಡುವ ಸಲುವಾಗಿಯೇ ನಾನೂ ಈ ಹೆಜ್ಜೆ ಇಟ್ಟಿದ್ದೇನೆ ಎಂದರು.

ಸಹೋದರ ಮಧುಗೂ ಟಾಂಗ್

ತಂದೆಯ ಸಾವನ್ನು ನಾನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿಲ್ಲ. ಎಮೋಷನಲ್ ರಾಜಕಾರಣವನ್ನು ಯುವ ಜನರು ಬಯಸುವುದಿಲ್ಲ. ಅವರು ಅಭಿವೃದ್ಧಿಯ ಕಡೆಗೆ ಗಮನ ಕೇಂದ್ರಿಕರಿಸುತ್ತಾರೆ. ಒಳ್ಳೆಯ ವಿಚಾರಕ್ಕೆ ತಂದೆ – ತಾಯಿಯನ್ನು ಸ್ಮರಿಸುತ್ತೇವೆ. ಆದರೆ, ತಂದೆಯ ಸಾವನ್ನು ರಾಜಕಾರಣಕ್ಕೆ ಬಳಸುವುದು ನಾಡಿಗೆ ಮಾಡುವ ದ್ರೋಹವಾಗುತ್ತದೆ ಎಂದು ಸಹೋದರ ಮಧು ಬಂಗಾರಪ್ಪ ಅವರಿಗೆ ಟಾಂಗ್ ನೀಡಿದರು.

ಕಾಂಗ್ರೆಸ್ ಬೇಕಿರುವುದು ಡೀಲರ್ಗಳು

ಚುನಾವಣೆ ಸಂದರ್ಭ, ಕಾಂಗ್ರೆಸ್ ಪಕ್ಷದ ಕೆಲವರು ಜೆಡಿಎಸ್ನ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಸೋಲುವುದಕ್ಕೆ ಕಾಂಗ್ರೆಸಿಗರೇ ಕಾರಣವಾಗುತ್ತಿದ್ದಾರೆ. ಶಿವಮೊಗ್ಗ, ಉತ್ತರ ಕನ್ನಡ, ಮಂಗಳೂರಿನಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾ ಸಮಿತಿಗಳನ್ನು ಸಾಕಷ್ಟು ಸಮಸ್ಯೆಗಳಿವೆ ಎಂದು ಪಕ್ಷದ ಆಂತರಿಕ ಸಂಘರ್ಷಗಳನ್ನು ಕುಮಾರ್ ಬಂಗಾರಪ್ಪ ತೆರೆದಿಟ್ಟರು.

ಬಿಜೆಪಿ ಸೇರುವುದು ನಿಶ್ಚಿತ

ಯಾವುದೇ ಡಿಮಾಂಡ್ ಮಾಡದೆ, ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದೇನೆ. ಎಂಎಲ್ಎ ಟಿಕೆಟ್ ಕೊಡಿ, ಎಂಎಲ್ಸಿ ಮಾಡಿ ಎಂದೆಲ್ಲ ಕೇಳಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಕಟ್ಟುತ್ತೇನೆ ಎಂದು ಘೋಷಿಸಿದರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s