‘ಈಸೂರು ದಂಗೆ’ ಸಿನಿಮಾ ಮಾಡೇ ಮಾಡ್ತೀನಿ, ಶಿವಮೊಗ್ಗದಲ್ಲಿ ನಟ ಶಿವರಾಜ್​ ಕುಮಾರ್ ಸ್ಪಷ್ಟನೆ

ಲೈವ್ ಕನ್ನಡ ಶಿವಮೊಗ್ಗ

ಭಾರತದ ಸ್ವಾತಂತ್ರ್ಯಕ್ಕೆ ಸ್ಫೂರ್ತಿಯಾದ ಈಸೂರು ದಂಗೆಯ ಕುರಿತ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ. ಏಪ್ರಿಲ್ ನಂತರ ಚಿತ್ರೀಕರಣವೂ ಆರಂಭವಾಗಲಿದೆ. ಚಿತ್ರದ ನಾಯಕ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದ ನ್ಯಾಯಾಲಯದ ಅವರಣದಲ್ಲಿ, ಈ ಕುರಿತು ಮಾತನಾಡಿದ ಶಿವರಾಜ್ ಕುಮಾರ್ ಅವರು, ಈಸೂರು ದಂಗೆ ಕುರಿತು ಚಿತ್ರ ಮಾಡುವುದು ನಿಶ್ಚಿತ. ಏಪ್ರಿಲ್ ನಂತರ ಇದರ ವಿವರವನ್ನು ಬಹಿರಂಗಪಡಿಸುವುದಾಗಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು. ಚಳವಳಿಯಲ್ಲಿ ಭಾಗವಹಿಸಿ, ಗಲ್ಲಿಗೇರುವ ಸೂರಿ ಎಂಬ ಹೋರಾಟಗಾರರ ಪಾತ್ರದಲ್ಲಿ ಶಿವರಾಜ್ ಕುಮಾರ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಶಿಕಾರಿಪುರದ ವೈಭವ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕಲಾವಿದರ ಆಡಿಷನ್ ಕೂಡ ನಡೆಯುತ್ತಿದೆ.

ಏನಿದು ಈಸೂರು ದಂಗೆ?

ಮಹಾತ್ಮ ಗಾಂಧೀಜಿಯವರ ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’, ‘ಚಲೇಜಾವ್ ಚಳವಳಿ’ಗಳನ್ನು ಪಾಲಿಸಿ, ದೇಶದ ಧ್ಜಜವನ್ನು ಹಾರಿಸಿ, ಮೊದಲ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡಿತ್ತು ಶಿಕಾರಿಪುರದ ಈಸೂರು. 1942ರ ಆಗಸ್ಟ್ 27ರಂದು ಈ ಘೋಷಣೆ ಮೊಳಗಿಸಿ, ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಭಾರತದ ಧ್ವಜ ಹಾರಿಸಲಾಗಿತ್ತು. ಇದು ಇಡೀ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸುವಲ್ಲಿ ಪ್ರೇರಣೆಯಾಗಿತ್ತು. ವಿಷಯ ತಿಳಿದು, ಬ್ರಿಟೀಷ್ ಸೈನಿಕರು ಈಸೂರಿಗೆ ನುಗ್ಗಿದ್ದರು. ಮಹಿಳೆಯರ ಮೇಲೆ ಅತ್ಯಾಚಾರ, ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಿದ್ದರು. ಕೊನೆಗೆ ಹಲವರನ್ನು ಬಂಧಿಸಿ, ಗಲ್ಲಿಗೇರಿಸಿದ್ದರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s