ಹರಕೆರೆಗೆ ಲಕ್ಷ ಭಕ್ತರು, ರಾತ್ರಿ ಇಡೀ ನಾಲ್ಕು ಜಾಗರಣೆ ಪೂಜೆ

ಲೈವ್ ಕನ್ನಡ ಶಿವಮೊಗ್ಗ

ತಂಡೋಪ ತಂಡವಾಗಿ ಹರಿದು ಬರುತ್ತಿರುವ ಭಕ್ತ ಸಾಗರ. ತುಂಗಾ ನದಿಯಲ್ಲಿ ಮಿಂದೆದ್ದು ಪುನೀತರಾದ ಭಕ್ತರು. ಕೈಲಾಸವನ್ನೇ ತಲುಪಿದ ಶಿವನಾಮ ಸ್ಮರಣೆ. ಮಹಾಶಿವರಾತ್ರಿ ನಿಮಿತ್ತ ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇಗುಲದಲ್ಲಿ ಇಂದು ಬೆಳಗ್ಗೆಯಿಂದ ಕಂಡು ಬಂದ ದೃಶ್ಯ ಇದು.

ಶೃಂಗೇರಿ ಮಠದ ಸಂಸ್ಥಾನಕ್ಕೆ ಸೇರಿರುವ ಶ್ರೀರಾಮೇಶ್ವರ ದೇಗುಲದಲ್ಲಿ, ರಾಮೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗ್ಗೆಯಿಂದಲೂ ಪೂಜೆ ನಡೆಯುತ್ತಿದೆ. ತುಂಗಾ ನದಿ ತೀರದಲ್ಲಿರುವುದರಿಂದ, ಭಕ್ತರು ಹೊಳೆಯಲ್ಲಿ ಮಿಂದೆದ್ದು ಬಂದು, ರಾಮೇಶ್ವರನಿಗೆ ನಮನ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ ಎಂದು ಪ್ರಧಾನ ಅರ್ಚಕರಾದ ಶಿವಸ್ವಾಮಿ ಲೈವ್ ಕನ್ನಡ ಮೀಡಿಯಾಗೆ ತಿಳಿಸಿದರು. ಇಂದು ರಾತ್ರಿ ನಾಲ್ಕು ಜಾಗರಣೆ ಪೂಜೆಯನ್ನೂ ಇಲ್ಲಿ ನೆರವೇರಿಸಲಾಗುತ್ತಿದೆ.

ಹರಕೆರೆ ವಿಶೇಷ

ಹರಕೆರೆ ರಾಮೇಶ್ವರ ಕ್ಷೇತ್ರವೂ ಪುರಾಣ ಪ್ರಸಿದ್ಧ. ರಾಮಾಯಣದ ಕಾಲದಿಂದಲೂ ಈ ದೇಗುಲ ಇದೆ ಎಂಬ ನಂಬಿಕೆ ಇದೆ. ಪೂರ್ವ ದಿಕ್ಕಿಗಿದ್ದ ದೇಗುಲವನ್ನು ಪಶ್ಚಿಮಾಭಿಮುಖ ಮಾಡಲಾಗಿದೆ. ಎಲ್ಲಾ ದೇಗುಲಗಳಲ್ಲಿ ಪಾಣಿಪೀಠ ಎಡಕ್ಕೆ ತಿರುಗಿದ್ದರೆ, ಇಲ್ಲಿ ಬಲ ಭಾಗಕ್ಕಿದೆ. ಸಹಸ್ರ ಲಿಂಗ ಕ್ಷೇತ್ರ ಮತ್ತು ತುಂಗಾ ನದಿಯ ದಂಡೆಯ ಮೇಲಿರುವುದರಿಂದ, ಈ ಕ್ಷೇತ್ರಕ್ಕೆ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಿದ್ದಾರೆ. ಶಿವಮೊಗ್ಗ KSRTC ಬಸ್ ನಿಲ್ದಾಣದಿಂದ ಮೂರೂವರೆ ಕಿ.ಮೀ ದೂರದಲ್ಲಿದೆ ಹರಕೆರೆ. 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s